ಶಿವಸಂಚಾರ

ಶ್ರೀ ಶಿವಕುಮಾರ ಕಲಾಸಂಘದ 3238;ಶಮಾನೋತ್ಸವದ ಕಾಣ್ಕೆಯಾಗಿ 1997ರಲ್ಲಿ ಮೈದಾಳಿದ್ದು ' ಶಿವಸಂಚಾರ ' ರಂಗರೆಪರ್ಟರಿ.
ಕನ್ನಡರಂ ಗ ಭೂಮಿಯನ್ನು ಶ್ರೀಮಂತಗೊಳಿಸಿ   ವೃತ್ತಿಪರತೆಯ ಮೂಲಕಸ್ಥಾವರವನ್ನುನಿರಾಕರಿಸಿಜಂಗಮತ್ವದಕನಸುಕಾಣುತ್ತಲಿದ್ದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರ ಕಲ್ಪನೆಗೆ ರಂಗಜಂಗಮದ ಕಲ್ಪನೆ ಕೊಟ್ಟವರು ಹಿರಿಯ ರಂಗಕರ್ಮಿ ಸಿಜಿಕೆ. ವರ್ಷದುದ್ದಕ್ಕೂ ರಂಗಕಹಳೆ ಮೊಳಗಬೇಕು.

>>

ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು

ಶ್ರೀ ತರಳಬಾಳು ಜಗದ್ಗುರು ಪರಂಪರೆಯಲ್ಲಿ ಚಿರಸ್ಮರಣೀಯ ಹೆಸರು. ಪೂಜ್ಯರು ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ 30ನೆಯ ಜಗದ್ಗುರುಗಳಾಗಿ ಬಸವ ಜಯಂತಿಯಂದು (10-5-1940) ಪಟ್ಟಾಭಿಷಿಕ್ತರಾದಾಗ ಮಠದ ಆರ್ಥಿಕ ಸ್ಥಿತಿ ಶೋಚನೀಯವಾಗಿತ್ತು. ಶಿಷ್ಯರಲ್ಲಿ ಸಂಘಟನೆ ಇರಲಿಲ್ಲ. ವಿದ್ಯೆಯ ಗಂಧವೂ ಇಲ್ಲದ ಕೃಷಿಕ ಭಕ್ತರೇ ಹೆಚ್ಚು. ಆಂತರಿಕ ಮತ್ತು ಬಾಹ್ಯ ವೈರಿಗಳು ಬೇರೆ.

>>
 

ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು

ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಉತ್ತರಾಧಿಕಾರಿಗಳು. ಸ್ವಾಮಿಗಳಾಗುವ ಮೊದಲೇ ದೇಶ ವಿದೇಶಗಳ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡಿ ವಿಶ್ವಪರ್ಯಟನೆಯ ಮೂಲಕ ವಿಶ್ವಜ್ಞಾನ ಪಡೆದವರು. 'ಸೂತಸಂಹಿತ'ಯ ಮೇಲೆ ಪೌಢ ಪ್ರಬಂಧ ಬರೆದು ಬೆನಾರಸ್ ಹಿಂದೂ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ.

>>

ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು

ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಕನಸಿನ ಬಳ್ಳಿ. ಜವಾನ ಕೆಲಸ ಬಯಸಿ 1967ರಲ್ಲಿ ಸಿರಿಗೆರೆಗೆ ಬಂದವರು. ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಆಶೀರ್ವಾದದಿಂದ ಸಿರಿಗೆರೆಯಲ್ಲೇ ಪಿ ಯು ಸಿ ಸೇರಿ ಬಿ ಎ ಪದವಿಯಲ್ಲಿ ತತ್ವಶಾಸ್ತ್ರ ವಿಭಾಗದಲ್ಲಿ ವಿಶ್ವವಿದ್ಯಾಲಯಕ್ಕೇ ಪ್ರಥಮ ಶ್ರೇಣಿಯೊಂದಿಗೆ ಚಿನ್ನದ ಪದಕ ಪಡೆದರು.

>>
  • ಹೊಸ ವರದಿಗಳು